Details About Anthem, More Details about Anthem

Play Anthem

 

ಜ್ಞಾನವೇ ಬೆಳಕು ಬೆಳಗೋಕೆ ಈ ಬದುಕು || ೨ ಸಲ ||
ಎರೆಯುತ್ತ ಜ್ಞಾನ ತೆರೆಸುತ್ತ ಕಣ್ಣ
ಈ ವಿದ್ಯೆ ಹೊನ್ನ ಕಿರಣ
ದಿನ ಪಾಠ ಪಠಣ ಗುರು ಬುದ್ಧಿ ವಚನ
ಇದು ವಿದ್ಯಾದಾನ ತಾಣ
ಪಡೆದಾಗಲೇನೆ ಸಿರಿ ಶಿಕ್ಷಣ
ನಮ್ಮ ಅಂಧಕಾರ ದಮನ
ಮಂಗಳೂರು ವಿಶ್ವವಿದ್ಯಾನಿಲಯ ||೨|| ನಮನ ನಮನ

ಜ್ಞಾನ ದೇಗುಲವೆ ಬೀಡು ಬಿಟ್ಟಿದೆ
ಕಡಲಿನ ತಡಿಯಲ್ಲಿ
ಅರಿವು ಮೂಡಿಸುವ ಗುರುವೆ ದೇವರು
ನಮ್ಮ ಈ ಗುಡಿಯಲ್ಲಿ
ಎಲ್ಲಾ ಸಾಧನೆಯ ಮುಟ್ಟೋ ಮೆಟ್ಟಿಲು
ಹತ್ತೋದಿಲ್ಲ ಮೊದಲು
ವಿದ್ಯೆಯೇ ನಮ್ಮಯ ಹಕ್ಕು ನಾಳೆಯ ದಿಕ್ಕು
ಜೀವನದ  ನೆಲೆಯು
ಜ್ಞಾನವೇ ಬೆಳಕು ಬೆಳಗೋಕೆ ಈ ಬದುಕು ||ಎರೆಯುತ್ತ||